ರಬೀಉಲ್ ಅವ್ವಲ್ (ಅರಬ್ಬಿ: ربيع الأول) — ಹಿಜರಿ ಕ್ಯಾಲೆಂಡರ್‌ನ ತೃತೀಯ ತಿಂಗಳು. ಈ ತಿಂಗಳಿಗೆ ಇಸ್ಲಾಮೀ ಧರ್ಮಶಾಸ್ತ್ರದಲ್ಲಿ ಯಾವುದೇ ವಿಶೇಷ ಮಹತ್ವವಿಲ್ಲದಿದ್ದರೂ ಈ ತಿಂಗಳಲ್ಲಿ ಮುಹಮ್ಮದ್ ಪೈಗಂಬರರು ಜನಿಸಿದ ಕಾರಣ ಈ ತಿಂಗಳಿಗೆ ಮಹತ್ವ ಕಲ್ಪಿಸಲಾಗುತ್ತದೆ. == ಅರ್ಥ == ಅರಬ್ಬಿ ಭಾಷೆಯಲ್ಲಿ ರಬೀಅ್ (ಅರಬ್ಬಿ: ربيع) ಎಂದರೆ ವಸಂತ. ಅವ್ವಲ್ (ಅರಬ್ಬಿ: الأول) ಎಂದರೆ ಪ್ರಥಮ. ರಬೀಉಲ್ ಅವ್ವಲ್ ಎಂದರೆ "ವಸಂತ ಕಾಲದ ಪ್ರಥಮ ತಿಂಗಳು". ಇದನ್ನು ಪ್ರಥಮ ತಿಂಗಳು ಎಂದು ಕರೆದಿರುವುದು ಏಕೆಂದರೆ ಇದರ ನಂತರ ರಬೀಉಲ್ ಆಖಿರ್ (ಅರಬ್ಬಿ: ربيع الآخر) "ವಸಂತ ಕಾಲದ ದ್ವಿತೀಯ ತಿಂಗಳು" ಬರುತ್ತದೆ. ಈ ತಿಂಗಳ ನಿಜವಾದ ಹೆಸರು ಶಹ್ರು ರಬೀಇನಿಲ್ ಅವ್ವಲು (ಅರಬ್ಬಿ: شهر ربيع الأول) ಎಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಆದರೆ ಸಾಮಾನ್ಯವಾಗಿ ಇದನ್ನು ರಬೀಉಲ್ ಅವ್ವಲ್ ಎಂದು ಕರೆಯಲಾಗುತ್ತದೆ. == ಬಳಕೆ == ಅರಬ್ಬರು ಸಾಮಾನ್ಯವಾಗಿ ಮೂರು ತಿಂಗಳುಗಳಿಗೆ ಮಾತ್ರ ಶಹ್ರ್ (ಅರೇಬಿಕ್ شهر) ಎಂಬ ಪೂರ್ವ ಪ್ರತ್ಯಯವನ್ನು () ಸೇರಿಸುತ್ತಾರೆ. ರಮದಾನ್, ರಬೀಉಲ್ ಅವ್ವಲ್ ಮತ್ತು ರಬೀಉಲ್ ಆಖಿರ್. ಇತರ ತಿಂಗಳುಗಳಿಗೆ ಅವರು ಶಹ್ರ್ ಸೇರಿಸುವುದಿಲ್ಲ. ಈ ತಿಂಗಳಿಗೆ ಮೊತ್ತಮೊದಲು ನಾಮಕರಣ ಮಾಡುವಾಗ ಅದು ವಸಂತ ಕಾಲವಾಗಿದ್ದರಿಂದ ಇದಕ್ಕೆ ರಬೀಅ್ (ವಸಂತ) ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. == ಇದನ್ನೂ ನೋಡಿ == ಹಿಜರಿ ಕ್ಯಾಲೆಂಡರ್ == ಉಲ್ಲೇಖಗಳು ==